Index   ವಚನ - 354    Search  
 
ಎಲೆ ಶಿವನೆ, ನೀವು ಭಕ್ತದೇಹಿಕದೇವನೆಂಬುದು ಎನಗೆ ನಿಶ್ಚಲವಾಗಿ ಕಾಣಬಂದಿತ್ತು ಅದೇನು ಕಾರಣವೆಂದೊಡೆ: ಎನ್ನ ತನುವೆ ನಿಮ್ಮ ತನುವಾಯಿತ್ತಾಗಿ. ಈ ತನುವಿಡಿದು ಗುರುವ ಕಂಡೆ. ಈ ತನುವಿಡಿದು ಲಿಂಗವ ಕಂಡೆ. ಈ ತನುವಿಡಿದು ಜಂಗಮವ ಕಂಡೆ. ಈ ತನುವಿಡಿದು ಪಾದತೀರ್ಥ ಪ್ರಸಾದವ ಕಂಡೆ. ಈ ತನುವಿಡಿದು ವಿಭೂತಿ ರುದ್ರಾಕ್ಷಿಯ ಕಂಡೆ. ಈ ತನುವಿಡಿದು ಮಂತ್ರದ ಮೂಲವ ಕಂಡೆ ಈ ತನುವಿಡಿದು ನಿಮ್ಮ ಶರಣರ ಮಹಾನುಭಾವವ ಕಂಡೆ. ಈ ತನುವಿಡಿದು ನೀವೇ ನಾನಾದ ಪರಿಯ ಕಂಡು ಬೆರಗಾದೆನಯ್ಯ ಅಖಂಡೇಶ್ವರಾ.