Index   ವಚನ - 364    Search  
 
ಫಲಪದ ಮುಕ್ತಿಯ ಬಯಸಿ ಯುಕ್ತಿಗೆಟ್ಟು ಸಕಲ ತೀರ್ಥಕ್ಷೇತ್ರಂಗಳಿಗೆ ಎಡೆಮಾಡಿ ತೊಟ್ಟನೆ ತೊಳಲಿ ಬಳಲಿ ಬೆಂಡಾಗಲೇತಕೋ? ಆ ಸಕಲ ತೀರ್ಥಕ್ಷೇತ್ರಂಗಳಲ್ಲಿ ಒದಗುವ ಮುಕ್ತಿಫಲಪದಂಗಳು ಒಬ್ಬ ಪರಮ ಜಂಗಮದ ತೀರ್ಥ ಪ್ರಸಾದವಕೊಂಡ ನಿಮಿಷಮಾತ್ರದಲ್ಲಿ ದೊರೆಕೊಂಬುದು ಹುಸಿಯಲ್ಲ ನೋಡಾ! ಅದೆಂತೆಂದೊಡೆ: ಪಾದತೀರ್ಥೇ ಸರ್ವತೀರ್ಥಾನಿ ಪ್ರಸಾದೇ ಕೋಟಿಲಿಂಗಕಂ | ನಿತ್ಯಂ ಸೇವಿತಭಕ್ತಾನಾಂ ಮಮ ರೂಪಂ ತು ಪಾರ್ವತಿ || ಎಂದುದಾಗಿ, ಇಂತಪ್ಪ ಪಾದತೀರ್ಥಪ್ರಸಾದವನು ಸದಾ ಸನ್ನಿಹಿತನಾಗಿ ಕೊಂಬ ಸದ್ ಭಕ್ತನು ಸಾಕ್ಷಾತ್ ಪರಶಿವಬ್ರಹ್ಮ ತಾನೆ ನೋಡಾ ಅಖಂಡೇಶ್ವರಾ.