Index   ವಚನ - 363    Search  
 
ಶಿವಪಾದೋದಕವ ನಂಬಿ ಕೊಂಡಡೆ ಮಲ ಮಾಯಾ ಕರ್ಮಂಗಳೆಲ್ಲ ಕಡೆಗಾಗಿರ್ಪುವು ನೋಡಾ! ಶಿವಪಾದೋದಕವ ನಂಬಿ ಕೊಂಡಡೆ ಆಧಿ ವ್ಯಾಧಿ ವಿಪತ್ತು ರೋಗರುಜೆ ಜನನ ಮರಣಂಗಳು ದೂರವಾಗಿರ್ಪುವು ನೋಡಾ! ಶಿವಪಾದೋದಕವ ನಂಬಿ ಕೊಂಡಡೆ ಅನಂತಕೋಟಿ ಪಾಪಂಗಳು ಪಲ್ಲಟವಾಗಿರ್ಪುವು ನೋಡಾ! ಶಿವಪಾದೋದಕವ ನಂಬಿ ಕೊಂಡಡೆ ಭಕ್ತಿ ಜ್ಞಾನ ವೈರಾಗ್ಯ ಮುಕ್ತಿಪದವು ದೊರೆಕೊಂಬುದು ನೋಡಾ! ಅದೆಂತೆಂದೊಡೆ: ವಾತುಲಾಗಮೇ- “ಅವಿದ್ಯಾ ಮೂಲಹರಣಂ ಜನ್ಮಕರ್ಮನಿವಾರಣಮ್ | ಜ್ಞಾನವೈರಾಗ್ಯಫಲದಂ ಗುರುಪಾದೋದಕಂ ಶುಭಮ್ || ಅಕಾಲಮೃತ್ಯುಮಥನಂ ಸರ್ವವ್ಯಾಧಿವಿನಾಶನಂ | ಸರ್ವಪಾಪೋಪಶಮನಂ ಶಂಭೋಃ ಪಾದೋದಕಂ ಶುಭಂ || ಎಂದುದಾಗಿ, ಇಂತಪ್ಪ ಶಿವಪಾದೋದಕವನು ನಂಬಿ ಅಂತರಂಗದಲ್ಲಿ ನಿಶ್ಚೈಸಿದ ನರನು ಹರನಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.