Index   ವಚನ - 366    Search  
 
ಗುರುಪ್ರಸಾದಿಯಾದಡೆ, ಗುರುಭಕ್ತಿಯಿಂದೆ ಗುರುವಿಂಗೆ ತನುವ ಸಮರ್ಪಿಸಬೇಕು. ಲಿಂಗಪ್ರಸಾದಿಯಾದಡೆ, ಲಿಂಗಭಕ್ತಿಯಿಂದೆ ಲಿಂಗಕ್ಕೆ ಮನವ ಸಮರ್ಪಿಸಬೇಕು. ಜಂಗಮಪ್ರಸಾದಿಯಾದಡೆ, ಜಂಗಮಭಕ್ತಿಯಿಂದೆ ಜಂಗಮಕ್ಕೆ ಧನವ ಸಮರ್ಪಿಸಬೇಕು. ಇಂತೀ ತ್ರಿವಿಧ ಭಕ್ತಿಯಿಲ್ಲದೆ. ಕಂಡವರ ಕಂಡು ಕೈವೊಡ್ಡಿ ಇಕ್ಕಿಸಿಕೊಂಡು ಅವಿಶ್ವಾಸದಿಂದೆ ಕೊಂಡಡೆ ಅದು ಕೆಂಡದಂತಿರ್ಪುದಯ್ಯಾ ಅಖಂಡೇಶ್ವರಾ.