Index   ವಚನ - 367    Search  
 
ಗುರುಪ್ರಸಾದಿಯಾದಡೆ, ಗುರುವೇ ಹರನಿಂದಧಿಕವೆಂಬ ಗುರುವಾಕ್ಯವ ಮೀರದಿರಬೇಕು. ಲಿಂಗಪ್ರಸಾದಿಯಾದಡೆ, ತನ್ನಂಗದಮೇಲಿರ್ಪ ಲಿಂಗವಲ್ಲದೆ ಅನ್ಯದೈವಂಗಳಿಗೆರಗದಿರಬೇಕು. ಜಂಗಮಪ್ರಸಾದಿಯಾದಡೆ, ತಾನು ತನ್ನದೆಂಬ ಅಹಂಮಮತೆ ಕೆಟ್ಟು ತಾನು ತಾನಾಗಬೇಕು. ಇಂತೀ ತ್ರಿವಿಧಪ್ರಸಾದವನು ಕೊಂಬ ನಡೆವಳಿಯನರಿಯದೆ ಪಂಕ್ತಿಯಲ್ಲಿ ಕುಳಿತು ಕಂಡಕಂಡವರ ಕಂಡು ಒತ್ತಿಗೆ ಕೈಯೊಡ್ಡಿ ಇಕ್ಕಿಸಿಕೊಂಡು ಆಂತರಂಗದಲ್ಲಿ ವಿಶ್ವಾಸವಿಲ್ಲದೆ ಮನಸ್ಸಿಗೆಬಂದಂತೆ ಮುಗಿವ ಸಂತೆ ಸೂಳೆಯಮಕ್ಕಳಿಗೆ ಶಿವಪ್ರಸಾದದ ಒಲುಮೆ ಇನ್ನೆಲ್ಲಿಯದಯ್ಯಾ ಅಖಂಡೇಶ್ವರಾ?