Index   ವಚನ - 407    Search  
 
ಅಪ್ಪುವೆ ಅಂಗವಾದ ಮಹೇಶ್ವರಂಗೆ ಬುದ್ಧಿಯೆ ಹಸ್ತ; ಆ ಹಸ್ತಕ್ಕೆ ಜ್ಞಾನಶಕ್ತಿ, ಆ ಶಕ್ತಿಗೆ ಗುರುಲಿಂಗ, ಆ ಗುರುಲಿಂಗಕ್ಕೆ ಜಿಹ್ವೇಂದ್ರಿಯವೆಂಬ ಮುಖ, ಆ ಮುಖಕ್ಕೆ ಸುರಸವೆ ಪದಾರ್ಥ; ಆ ಪದಾರ್ಥವನು ಜಿಹ್ವೆಯಲ್ಲಿಹ ಗುರುಲಿಂಗಕ್ಕೆ ನೈಷ್ಠಿಕಭಕ್ತಿಯಿಂದರ್ಪಿಸಿ, ಆ ಸುರಸ ಪ್ರಸಾದವನು ಪಡೆದು ಸುಖಿಸುವಾತನೇ ಮಹೇಶ್ವರನು ನೋಡಾ ಅಖಂಡೇಶ್ವರಾ.