Index   ವಚನ - 406    Search  
 
ಪೃಥ್ವಿಯೆ ಅಂಗವಾದ ಭಕ್ತಂಗೆ ಚಿತ್ತವೆ ಹಸ್ತ; ಆ ಹಸ್ತಕ್ಕೆ ಕ್ರಿಯಾಶಕ್ತಿ, ಆ ಶಕ್ತಿಗೆ ಆಚಾರಲಿಂಗ, ಆ ಲಿಂಗಕ್ಕೆ ಘ್ರಾಣೇಂದ್ರಿಯವೆಂಬ ಮುಖ, ಆ ಮುಖಕ್ಕೆ ಸುಗಂಧವೆ ಪದಾರ್ಥ; ಆ ಪದಾರ್ಥವನು ಘ್ರಾಣದಲ್ಲಿಹ ಆಚಾರಲಿಂಗಕ್ಕೆ ಶ್ರದ್ಧಾಭಕ್ತಿಯಿಂದರ್ಪಿಸಿ, ಆ ಸುಗಂಧದ ಪ್ರಸಾದವನು ಪಡೆದು, ಸುಖಿಸುವಾತನೆ ಸದ್ ಭಕ್ತನು ನೋಡಾ ಅಖಂಡೇಶ್ವರಾ.