Index   ವಚನ - 445    Search  
 
ಅನುಭಾವಿಯಾದಡೆ ತಿರುಳು ಕರಗಿದ ಹುರಿದ ಬೀಜದಂತಿರಬೇಕು. ಅನುಭಾವಿಯಾದಡೆ ಸುಟ್ಟ ಸರವೆಯಂತಿರಬೇಕು. ಅನುಭಾವಿಯಾದಡೆ ದಗ್ಧಪಟದಂತಿರಬೇಕು. ಅನುಭಾವಿಯಾದಡೆ ದರ್ಪಣದೊಳಗಣ ಪ್ರತಿಬಿಂಬದಂತಿರಬೇಕು. ಅನುಭಾವಿಯಾದಡೆ ಕಡೆದಿಳುಹಿದ ಕರ್ಪುರದ ಪುತ್ಥಳಿಯಂತಿರಬೇಕು. ಇಂತಪ್ಪ ಮಹಾನುಭಾವಿಗಳು ಆವ ಲೋಕದೊಳಗೂ ಅಪೂರ್ವವಯ್ಯಾ ಅಖಂಡೇಶ್ವರಾ.