ಕುಂಭಸಹಸ್ರ ಉದಕದೊಳಗೆ
ಬಿಂಬಿಸಿ ತೋರುವ ಸೂರ್ಯನೊಬ್ಬನಲ್ಲದೆ,
ಮತ್ತೆ ಹಲಬರುಂಟೆ ಅಯ್ಯಾ?
ಸಕಲ ದೇಹದೊಳಗೆ ಸಂಭ್ರಮಿಸಿ ತುಂಬಿರ್ಪ
ಪರವಸ್ತು ನೀನೊಬ್ಬನಲ್ಲದೆ,
ಮತ್ತಾರನು ಕಾಣೆನಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Kumbhasahasra udakadoḷage
bimbisi tōruva sūryanobbanallade,
matte halabaruṇṭe ayyā?
Sakala dēhadoḷage sambhramisi tumbirpa
paravastu nīnobbanallade,
mattāranu kāṇenayyā akhaṇḍēśvarā.