Index   ವಚನ - 453    Search  
 
ಸಕಲ ವಿಸ್ತಾರದ ರೂಪು ನಿಮ್ಮೊಳಗಿರ್ಪುದು: ನೀವೆನ್ನ ಮನದಲ್ಲಿ ಅಡಗಿರ್ಪಿರಿ. ಅದೆಂತೆಂದೊಡೆ: ಕರಿ ಕಣ್ಣಾಲಿಯೊಳಗಡಗಿದಂತೆ, ನೀವು ಭಕ್ತಜನಮನೋವಲ್ಲಭನಾದ ಕಾರಣ ಎನ್ನ ಮನದ ಕೊನೆಯ ಮೊನೆಯಲ್ಲಿ ಅಡಗಿರ್ದಿರಯ್ಯಾ ಅಖಂಡೇಶ್ವರಾ.