ಶುದ್ಧಪದ್ಮಾಸನದಲ್ಲಿ ಕುಳ್ಳಿರ್ದು ಊರ್ಧ್ವಲೋಚನನಾಗಿ,
ಉಲಿವ ಕರಣಂಗಳನೆಲ್ಲ ಉನ್ಮನಿಯ ಸ್ಥಾನದಲ್ಲಡಗಿಸಿ,
ಮನವನೊಮ್ಮನವ ಮಾಡಿ ಅನಾಹತಕರ್ಣದಲ್ಲಿ ಲಾಲಿಸಲು,
ಸಹಸ್ರದಳಕಮಲಮಧ್ಯದಲ್ಲಿ
ಉದ್ಘೋಷಿಸುತ್ತಿರ್ಪುದು ಸುನಾದಬ್ರಹ್ಮವು.
ಅಂತಪ್ಪ ಸುನಾದಬ್ರಹ್ಮದಲ್ಲಿ ಮನವಡಗಿ
ಮೈಮರೆದಿರ್ಪಾತನೆ ಘನಲಿಂಗಯೋಗಿಯಯ್ಯಾ
ಅಖಂಡೇಶ್ವರಾ.
Art
Manuscript
Music
Courtesy:
Transliteration
Śud'dhapadmāsanadalli kuḷḷirdu ūrdhvalōcananāgi,
uliva karaṇaṅgaḷanella unmaniya sthānadallaḍagisi,
manavanom'manava māḍi anāhatakarṇadalli lālisalu,
sahasradaḷakamalamadhyadalli
udghōṣisuttirpudu sunādabrahmavu.
Antappa sunādabrahmadalli manavaḍagi
maimaredirpātane ghanaliṅgayōgiyayyā
akhaṇḍēśvarā.