Index   ವಚನ - 484    Search  
 
ಸಹಸ್ರದಳ ಕಮಲಮಧ್ಯದಲ್ಲಿ ಪಂಚಪತ್ರ. ಆ ಪಂಚಪತ್ರದ ಮಧ್ಯದಲ್ಲಿ ಮಂಡಲತ್ರಯ. ಆ ಮಂಡಲತ್ರಯ ಮಧ್ಯದಲ್ಲಿ ಪ್ರಣವಪೀಠ. ಆ ಪ್ರಣವಪೀಠದ ಮೇಲೆ ಮೂರ್ತಿಗೊಂಡು ಬೆಳಗುವ ನಿಮ್ಮ ದಿವ್ಯ ಮೂರ್ತಿಯ ಕಂಡು ಹರುಷಿತನಾದೆನಯ್ಯಾ ಅಖಂಡೇಶ್ವರಾ.