ಈ ಲಕ್ಷ್ಯತ್ರಯಂಗಳನರಿದ ಯೋಗೀಶ್ವರನು
ಮುಂದೆ ಮುದ್ರಾತ್ರಯಂಗಳನರಿಯಬೇಕೆಂತೆನೆ:
ಶಿವಧ್ಯಾನದಲ್ಲಿ ಕುಳ್ಳಿರ್ದು
ನವದ್ವಾರಂಗಳಂ ಬಲಿವುದೆ ಷಣ್ಮುಖೀಮುದ್ರೆ.
ಈ ಷಣ್ಮುಖೀಮುದ್ರೆಯಿಂದೆ ಒಳಗೆ
ನಾದಾನುಸಂಧಾನದಲ್ಲಿ ಮನೋಮಾರುತಂಗಳು
ನಿಶ್ಚಲಮಾಗಿರ್ಪುದೆ
ಖೇಚರೀಮುದ್ರೆ ಎನಿಸುವುದು.
ನೇತ್ರಂಗಳ ತುದಿಯ ಸೂಕ್ಷ್ಮರಂಧ್ರವನುಳ್ಳ
ಕೃಷ್ಣತಾರಾಮಂಡಲದಮಧ್ಯದಲ್ಲಿ ಶುದ್ಧಚಿತ್ತದಿಂದೆ
ನಿಶ್ಚಲಮಾದ ಪರಮಾತ್ಮಜ್ಯೋತಿಸ್ವರೂಪಮಪ್ಪ
ದಿವ್ಯಲಿಂಗಮಂ ಕಾಣ್ಬುದೇ
ಶಾಂಭವೀಮುದ್ರೆಯೆನಿಸುವುದಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Ī lakṣyatrayaṅgaḷanarida yōgīśvaranu
munde mudrātrayaṅgaḷanariyabēkentene:
Śivadhyānadalli kuḷḷirdu
navadvāraṅgaḷaṁ balivude ṣaṇmukhīmudre.
Ī ṣaṇmukhīmudreyinde oḷage
nādānusandhānadalli manōmārutaṅgaḷu
niścalamāgirpude
khēcarīmudre enisuvudu.
Nētraṅgaḷa tudiya sūkṣmarandhravanuḷḷa
kr̥ṣṇatārāmaṇḍaladamadhyadalli śud'dhacittadinde
niścalamāda paramātmajyōtisvarūpamappa
divyaliṅgamaṁ kāṇbudē
śāmbhavīmudreyenisuvudayyā akhaṇḍēśvarā.