Index   ವಚನ - 560    Search  
 
ಗುರು ಕರುಣಿಸಿಕೊಟ್ಟ ಮಂತ್ರವೆ ಸಕಲಬಯಕೆಯನುಂಟುಮಾಡುವುದಲ್ಲದೆ, ತನ್ನ ತಾ ನೆನೆದ ಮಂತ್ರವು ಸಿದ್ಧಿಯನುಂಟುಮಾಡದು ನೋಡಾ! ಗುರುಕೊಟ್ಟ ಲಿಂಗವೆ ಮುಕ್ತಿಯನೀವುದಲ್ಲದೆ, ತನ್ನ ತಾನೆ ಕಟ್ಟಿಕೊಂಡ ಲಿಂಗವು ಮುಕ್ತಿಯನೀಯದು ನೋಡಾ! ಇದು ಕಾರಣ, ಗುರೂಪದೇಶವ ಪಡೆಯಲರಿಯದೆ ಬರಿದೆ ಭಕ್ತರೆನಿಸಿಕೊಂಬ ಶೈವಮತದ ಭವಿಗಳಿಗೆ ಭವಜಾಲದಲ್ಲಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.