ಎಂಬತ್ತುನಾಲ್ಕುಲಕ್ಷ ಮಂಡಲದೊಳಗೆ
ಒಂದೊಂದು ಜನ್ಮದಲ್ಲಿ ಸಹಸ್ರವೇಳೆ
ಸತ್ತು ಹುಟ್ಟಿ ಸುತ್ತಿಸುಳಿದು
ಸುಖದುಃಖಗಳಿಂದೆ ನೊಂದು ಬೆಂದು
ತೊಳಲಿ ಬಳಲುವ ಜೀವಂಗೆ,
ಬಡವಂಗೆ ಕಡವರ ದೊರೆಕೊಂಡಂತೆ,
ಮನುಷ್ಯದೇಹವು ದೊರೆಕೊಂಡಲ್ಲಿ,
ಶಿವಕೃಪೆಯಿಂದ ಗುರುಕಾರುಣ್ಯವಾಗಿ
ಅಂಗದ ಮೇಲೆ ಲಿಂಗಧಾರಣವಾದ ಬಳಿಕ
ಆ ಲಿಂಗದ ಮೇಲೆ ಪ್ರಾಣಪ್ರತಿಷ್ಠೆಯಂ ಮಾಡಿ
ನಿಮಿಷ ನಿಮಿಷಾರ್ಧವಗಲದಿರಬೇಕು.
ಮತ್ತಂ, ಆ ಲಿಂಗದಲ್ಲಿ ಐಕ್ಯವಾಗುವನ್ನಬರ
ಸತ್ಕ್ರಿಯಾ ಸಮ್ಯಕ್ಜ್ಞಾನವ ಬಿಡದಿರಬೇಕು.
ಇಷ್ಟುಳ್ಳಾತಂಗೆ ಶಿವನಲ್ಲಿ ಸಮರಸವಲ್ಲದೆ,
ಅಂತರಂಗದಲ್ಲಿ ಅಂತಃಪ್ರಾಣಲಿಂಗದ
ಪರಿಪೂರ್ಣ ಬೆಳಗ ಕಂಡೆವು.
ಇನ್ನು ಇಷ್ಟಲಿಂಗದ ಹಂಗು ಏತಕೆಂದು
ಆ ಇಷ್ಟಲಿಂಗವ ಕಡೆಗೆ ತೆಗೆದು ಹಾಕಿ
ಲಿಂಗಬಾಹ್ಯನಾಗಿ ವ್ರತಗೇಡಿಯಾದಾತನು
ಒಂದುಕೋಟಿ ಕಲ್ಪಾಂತರವು ನರಕದೊಳಗಿರ್ದು
ಅಲ್ಲಿಂದತ್ತ ಎಂಬತ್ತುನಾಲ್ಕುಲಕ್ಷ ಜನ್ಮದಲ್ಲಿ
ಬಂಧನಬಡುತಿರ್ಪನಲ್ಲದೆ ಶಿವನಲ್ಲಿ
ಅವಿರಳ ಸಮರಸವಿಲ್ಲ ನೋಡಾ!
ಅದೆಂತೆಂದೊಡೆ:
``ಅಂಗೇ ಚ ಲಿಂಗಸಂಬಂಧಃ ಲಿಂಗಂಚ ಪ್ರಾಣಸಂಯುತಂ |
ನಿಮಿಷಾರ್ಧಂ ಪ್ರಾಣವಿಯೋಗೇನ ನರಕೇ ಕಾಲಮಕ್ಷಯಂ||''
ಎಂದುದಾಗಿ, ಇಂತಪ್ಪ ಅದ್ವೈತ ಹೀನಮಾನವರ
ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Embattunālkulakṣa maṇḍaladoḷage
ondondu janmadalli sahasravēḷe
sattu huṭṭi suttisuḷidu
sukhaduḥkhagaḷinde nondu bendu
toḷali baḷaluva jīvaṅge,
baḍavaṅge kaḍavara dorekoṇḍante,
manuṣyadēhavu dorekoṇḍalli,
śivakr̥peyinda gurukāruṇyavāgi
aṅgada mēle liṅgadhāraṇavāda baḷika
ā liṅgada mēle prāṇapratiṣṭheyaṁ māḍi
nimiṣa nimiṣārdhavagaladirabēku.
Mattaṁ, ā liṅgadalli aikyavāguvannabara
satkriyā samyakjñānava biḍadirabēku.
Iṣṭuḷḷātaṅge śivanalli samarasavallade,
antaraṅgadalli antaḥprāṇaliṅgada
paripūrṇa beḷaga kaṇḍevu.
Innu iṣṭaliṅgada haṅgu ētakendu
ā iṣṭaliṅgava kaḍege tegedu hāki
liṅgabāhyanāgi vratagēḍiyādātanu
ondukōṭi kalpāntaravu narakadoḷagirdu
allindatta embattunālkulakṣa janmadalli
bandhanabaḍutirpanallade śivanalli
aviraḷa samarasavilla nōḍā!
Adentendoḍe:
``Aṅgē ca liṅgasambandhaḥ liṅgan̄ca prāṇasanyutaṁ |
nimiṣārdhaṁ prāṇaviyōgēna narakē kālamakṣayaṁ||''
endudāgi, intappa advaita hīnamānavara
enagom'me tōradirayyā akhaṇḍēśvarā.