Index   ವಚನ - 613    Search  
 
ತನು ಗುರುವಾದುದೆ ಶೀಲ. ಮನ ಲಿಂಗವಾದುದೆ ಶೀಲ. ಧನ ಜಂಗಮವಾದುದೆ ಶೀಲ. ಅಖಂಡೇಶ್ವರನೆಂಬ ಪರಶಿವನು ತಾನೆ ಆಗಿ ಸುಳಿವುದೆ ಮಹಾಶೀಲ ನೋಡಿರಣ್ಣಾ.