Index   ವಚನ - 650    Search  
 
ಅಂಗಕ್ಕೆ ಇಷ್ಟಲಿಂಗದ ಸತ್ಕ್ರಿಯವನಳವಡಿಸಿಕೊಂಡು ಪ್ರಾಣಕ್ಕೆ ಪ್ರಾಣಲಿಂಗದ ಸಮ್ಯಕ್‍ಜ್ಞಾನಾಚಾರವ ಸಂಬಂಧಿಸಿ, ಅಂಗಲಿಂಗವೆಂಬ ಭಿನ್ನಭಾವವಳಿದು ಒಳಹೊರಗೆಲ್ಲ ಅಖಂಡಜ್ಞಾನ ಸತ್‍ಕ್ರಿಯಾಚಾರಮಯವಾದ ಶರಣಂಗೆ ವಾರ ತಿಥಿ ಲಗ್ನ ವಿಘ್ನಂಗಳಿಲ್ಲ, ಶುಭಾಶುಭಂಗಳಿಲ್ಲ, ಸ್ತುತಿನಿಂದೆಗಳಿಲ್ಲ, ಪೂಜ್ಯಾಪೂಜ್ಯಂಗಳಿಲ್ಲವಾಗಿ, ಅಖಂಡೇಶ್ವರಾ, ನಿಮ್ಮ ಶರಣ ಎಂತಿರ್ದಂತೆ ಸಹಜಬ್ರಹ್ಮವೆ ಆಗಿರ್ಪನು.