ಪೃಥ್ವಿಯ ಸಾರಗೆಟ್ಟ ಹೊಲದಲ್ಲಿ,
ಆರವೆಯಿಲ್ಲದ ಮರ ಹುಟ್ಟಿ,
ಕಣ್ಣಿಗೆ ತೋರಲಿಲ್ಲದ ಬಿತ್ತಾಯಿತ್ತು,
ಅದು ಈ ಧರೆಯಲ್ಲಿ ಬಿತ್ತಿದಡೆ, ಆ ಧರೆಯಲ್ಲಿ ಹುಟ್ಟಿತ್ತು,
ಅದರಿಂದಾಚೆ ಫಲವಾಯಿತ್ತು, ಕೊಂಬಿಂದೀಚೆ ಹಣ್ಣಾಯಿತ್ತು.
ಹಣ್ಣು ಮೆಲುವ ಬಾಯಿಗೆ ಹಣ್ಣಿತ್ತು,
ಈ ಹಣ್ಣಿನ ಸವಿಯ ಹೇಳು, ಚೆನ್ನಬಂಕೇಶ್ವರಲಿಂಗಾ.
Art
Manuscript
Music Courtesy:
Video
TransliterationPr̥thviya sārageṭṭa holadalli,
āraveyillada mara huṭṭi,
kaṇṇige tōralillada bittāyittu,
adu ī dhareyalli bittidaḍe, ā dhareyalli huṭṭittu,
adarindāce phalavāyittu, kombindīce haṇṇāyittu.
Haṇṇu meluva bāyige haṇṇittu,
ī haṇṇina saviya hēḷu, cennabaṅkēśvaraliṅgā.