Index   ವಚನ - 86    Search  
 
ಬಲುಗಲ್ಲಿನ ಮಣಿಯ ಬೆಗಡವನಿಕ್ಕೂದಕ್ಕೆ ಹುಲ್ಲು ಸೂಜಿ, ತಾವರೆಯ ನೂಲಿನ ಬಿಲ್ಲು, ದಳ್ಳುರಿಯ ನೇಣು. ಇವೆಲ್ಲವ ಕೂಡಿ ಕಲ್ಲಿನ ಮೇಲಿರಿಸಿ, ಮಣಿಯ ಮುಖಕ್ಕಿಕ್ಕಿ ತೆಗೆಯಲಾಗಿ ಮಣಿ ವಿರಾಳವಾಯಿತ್ತು. ಹುಲ್ಲು, ಬಿಲ್ಲು, ದಳ್ಳುರಿಯ ನೇಣು, ಬಂಕೇಶ್ವರಲಿಂಗದಲ್ಲಿ ಅಡಗಿತ್ತು. ಇದ ಬಲ್ಲವರಾರು ಹೇಳಾ?