Index   ವಚನ - 26    Search  
 
ಅಯ್ಯಾ ಏನು ಏನೂ ಇಲ್ಲದಂದು, ಧರೆ ಬ್ರಹ್ಮಾಂಡಗಳು ಇಲ್ಲದಂದು, ಸಚರಾಚರ ರಚನೆಗೆ ಬಾರದಂದು ಅಂದು ನೀವಿಪ್ಪ ಭೇದವ ಎನಗೆ ತೋರಿದರಾಗಿ. ಅದು ಹೇಗೆಂದರೆ: ನಾನು ಪುಷ್ಪದ ಹಾಗೆ, ನೀವು ಪರಿಮಳದ ಹಾಗೆ, ನಾನಾಲಿಯ ಹಾಗೆ, ನೀವು ನೋಟದ ಹಾಗೆ, ನಾ ಬ್ರಹ್ಮಾಂಡದ ಹಾಗೆ, ನೀವು ಬಯಲಿನ ಹಾಗೆ, ಒಳಹೊರಗೆ ಪರಿಪೂರ್ಣವಾಗಿಪ್ಪಿರಿಯಾಗಿ, ಆ ಭೇದವನು ಎನಗೆ ನೀವೆ ಅರುಹಿದಿರಾಗಿ. ಉರಿ ಕರ್ಪುರದ ಸಂಯೋಗದಂತೆ ಎರಡೂ ಒಂದೆ ಎಂಬ ಭೇದವ ಎನ್ನ ಗುರು ತಂದೆ ನೀವು ತೋರಿದಿರಲ್ಲ. ಚೆನ್ನಮಲ್ಲೇಶ್ವರ ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ನೀವೆನ್ನ ಪರಮಾರಾಧ್ಯರಾದ ಕಾರಣ.