ಧ್ಯಾನದಲ್ಲಿ ಕುಳ್ಳಿರ್ದು, ಜ್ಞಾನದಲ್ಲಿ ನೋಡಿ,
ಮೌನ ಮುಗ್ಧವ ಮಾಡಿ, ಸ್ವಾನುಭಾವದಿಂದರಿದು,
ಮತ್ತೇನೇನು ಹೊದ್ದಲೀಯದೆ,
ತಾನು ತಾನಾಗಿ, ಜ್ಞಾನಕ್ಕತೀತನಾಗಿ,
ಧ್ಯಾನ ಧಾರಣ ಸಮಾಧಿಯ ಮೆಟ್ಟಿನಿಂದ ನಿಜಲಿಂಗೈಕ್ಯಂಗೆ
ನಮೋ ನಮೋ ಎಂಬೆ.
ಇಂದೆನ್ನ ಭವ ನಷ್ಟವಾಗಿ ಹೋದವು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Dhyānadalli kuḷḷirdu, jñānadalli nōḍi,
mauna mugdhava māḍi, svānubhāvadindaridu,
mattēnēnu hoddalīyade,
tānu tānāgi, jñānakkatītanāgi,
dhyāna dhāraṇa samādhiya meṭṭininda nijaliṅgaikyaṅge
namō namō embe.
Indenna bhava naṣṭavāgi hōdavu kāṇā,
basavapriya kūḍalacennabasavaṇṇā.