Index   ವಚನ - 191    Search  
 
ಲಿಂಗನಯನದಲ್ಲಿ ನೋಡುತ್ತ, ಲಿಂಗಜಿಹ್ವೆಯಲ್ಲಿ ನುಡಿವುತ್ತ, ಲಿಂಗಹಸ್ತದಲ್ಲಿ ಮುಟ್ಟುತ್ತ, ಲಿಂಗನಾಸಿಕದಲ್ಲಿ ವಾಸಿಸುತ್ತ, ಲಿಂಗಸ್ತೋತ್ರದಲ್ಲಿ ಕೇಳುತ್ತ, ಲಿಂಗಪಾದದಲ್ಲಿ ನಡೆವುತ್ತ, ಸರ್ವಾಂಗಲಿಂಗಮಯವಾದ ಶರಣರ ಸಂಗಸುಖದೊಳಗೆ ಎನ್ನನಿರಿಸಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .