ಶೀಲವಂತರು, ಶೀಲವಂತರು ಎಂದೇನೊ ?
ಶೀಲವಂತಿಕೆಯನಾರು ಬಲ್ಲರು?
ಶೀಲವಾದರೆ ಶಿವನೊಳು ಬೆರೆವುದೇ ಶೀಲ.
ಶೀಲವಾದರೆ ಗುರುಲಿಂಗಜಂಗಮವ
ತನ್ನೊಳಗರಿವುದೇ ಶೀಲ.
ಅದಕ್ಕೆ ಮೀರಿದ ಶೀಲವಾದರೆ,
ಹಸಿವು ತೃಷೆ ನಿದ್ರೆ ವಿಷಯವ ಕೆಡಿಸುವುದೇ ಶೀಲ.
ಅದಕ್ಕೆ ತುರಿಯಾತೀತ ಶೀಲವಾದರೆ,
ಬಾಲನಾಗಿ ತನ್ನ ಲೀಲಾವಿನೋದವ
ಭೂಮಿಯ ಮೇಲೆ ನಟಿಸುವುದೇ ಶೀಲ.
ಇದನರಿಯದೆ ಶೀಲಶೀಲವೆಂದು ಮನೆಮನೆಗೆ ಶೀಲವಲ್ಲದೆ,
ತನ್ನ ತನಗೆ ಕಾಯಕೃತ್ಯವಲ್ಲದೆ,
ಇದನರಿದು ಮೋಹ ಘನವನೆ ಮರೆದು,
ಮನವನೆ ಬಳಲಿಸಿ,
ಘನವ ಮಾಡಿ, ತನುವ ಹೊರೆದೆನೆಂಬ
ಬಿನುಗರ ನುಡಿಯ ಮೆಚ್ಚುವನೆ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ?
Art
Manuscript
Music
Courtesy:
Transliteration
Śīlavantaru, śīlavantaru endēno?
Śīlavantikeyanāru ballaru?
Śīlavādare śivanoḷu berevudē śīla.
Śīlavādare guruliṅgajaṅgamava
tannoḷagarivudē śīla.
Adakke mīrida śīlavādare,
hasivu tr̥ṣe nidre viṣayava keḍisuvudē śīla.
Adakke turiyātīta śīlavādare,
bālanāgi tanna līlāvinōdava
bhūmiya mēle naṭisuvudē śīla.
Idanariyade śīlaśīlavendu manemanege śīlavallade,
tanna tanage kāyakr̥tyavallade,
idanaridu mōha ghanavane maredu,
manavane baḷalisi,
ghanava māḍi, tanuva horedenemba
binugara nuḍiya meccuvane,
nam'ma basavapriya kūḍalacennabasavaṇṇa?