ಸುಖಾನುಭಾವ, ಲಿಂಗಾನುಭಾವವೆಂದು ನುಡಿದಾಡುತಿಪ್ಪಿರಿ.
ಲಿಂಗದ ನೆಲೆಯನಾರು ಬಲ್ಲರು?
ಆರುಲಿಂಗ, ಮೂರುಲಿಂಗ, ಮೂವತ್ತಾರುಲಿಂಗ,
ಬೇರೆ ಇನ್ನೂರ ಹದಿನಾರು ಲಿಂಗವೆಂದು
ಎಮ್ಮ ಶರಣರು ಸಾರಿಹೋದ
ವಾಕ್ಯವನೆ ಮಾರುತಿಪ್ಪರಲ್ಲದೆ,
ಬೇರೆ ಇಪ್ಪತ್ತೊಂದು ಮಹಾಘನಲಿಂಗವನಾರೂ ಅರಿಯರು,
ನಿಮ್ಮ ಶರಣರಲ್ಲದೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Sukhānubhāva, liṅgānubhāvavendu nuḍidāḍutippiri.
Liṅgada neleyanāru ballaru?
Āruliṅga, mūruliṅga, mūvattāruliṅga,
bēre innūra hadināru liṅgavendu
em'ma śaraṇaru sārihōda
vākyavane mārutipparallade,
bēre ippattondu mahāghanaliṅgavanārū ariyaru,
nim'ma śaraṇarallade,
basavapriya kūḍalacennabasavaṇṇā.