Index   ವಚನ - 222    Search  
 
ಹಂಚುಕಂಥೆ, ಅತೀತ, ವಿರಕ್ತರು, ಸ್ಥಲದವರು ಎಂದು ನುಡಿದಾಡುವರು. ಜಂಗಮ ಒಂದೆ, ಲಿಂಗ ಒಂದೆ, ಗುರು ಒಂದೆ. ಎನ್ನ ಪರಮಾರಾಧ್ಯರು ಬಸವಣ್ಣ , ತನ್ನ ಲೀಲೆಯಿಂದ ಒಂದ ಮೂರು ಮಾಡಿ ತೋರಿದ, ಮೂರನೊಂದು ಮಾಡಿ ತೋರಿದ. ಆ ಒಂದು ನಾಮರೂಪಿಗಿಲ್ಲ. ಇದರಂದವ ಬಲ್ಲ ಶರಣರು ತಿಳಿದು ನೋಡಿ. ಇದನರಿಯದೆ ಸ್ಥಲನೆಲೆಯುಂಟೆಂದು ಹೊಲಬುಗಾಣದೆ ಹೋರಾಡಿ, ಭವಭಾರಿಗಳಾಗಬೇಡಾ! ಭವವಿರಹಿತ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಂಗೆ, ಬಯಕೆ ಸವೆದು, ಭಾವ ಬಯಲಾಗಿ ನಮೋ ನಮೋ ಎಂದು ಬದುಕಿದೆ. ನೀವೂ ಬದುಕಿರೊ.