Index   ವಚನ - 229    Search  
 
ಹಸನ ಮಾಡಿ ಹರಗಿ ಹೊಲದಲ್ಲಿ ಕಸವ ಬಿತ್ತುವ ಮರುಳರಂತೆ, ವಿಷಯಸುಖಂಗಳಿಗೆ ಹುಸಿಯನೆ ನುಡಿದು, ಗಸಣೆಗೊಳಗಾಗುವ ಮನುಜರೆತ್ತ ಬಲ್ಲರೊ, ಮಹಾಘನಗುರುವಿನ ನೆಲೆಯ? ಮರಣಬಾಧೆಗೊಳಗಾದವರು ನಿಮ್ಮನೆತ್ತ ಬಲ್ಲರೊ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?