Index   ವಚನ - 235    Search  
 
ಹಿಂದನರುಹಿ ಹಿಂದ ಹರಿದಿರಿ, ಮುಂದನರುಹಿ ಮುಕ್ತನ ಮಾಡಿದಿರಿ. ಸಂದುಸಂಶಯವನಳಿದಿರಿ, ಗುರುಲಿಂಗಜಂಗಮವ ಒಂದೇ ಎಂದು ತೋರಿದಿರಿ. ಪ್ರಸಾದವೇ ಪರವೆಂದರುಹಿದಿರಿ. ಇಂತಿವರ ಪೂರ್ವಾಶ್ರಯವ ಕಳೆದು ಎನಗೆ ಏಕವ ಮಾಡಿ ತೋರಬೇಕಾಗಿ, ನೀವು ಒಂದು ಸಾಕಾರವ ತಾಳಿ ಬಂದಿರಿ. ಇದು ಕಾರಣ ನಿಮ್ಮ ಲೋಕಾರಾಧ್ಯರೆಂದು ನೆರೆನಂಬಿ ಸಲೆಸಂದು ನಿಮ್ಮ ಪಾದದೊಳು ಏಕವಾದೆನಯ್ಯ ಚೆನ್ನಮಲ್ಲೇಶ್ವರ. ಇದ ನಿಮ್ಮನರಿದ ಶರಣರೇ ಬಲ್ಲರು. ಬಸವಪ್ರಿಯ ಕೂಡಲಚೆನ್ನಬಸವಣ್ಣ.