ಹುಟ್ಟುವಾತ ಲಿಂಗಪಿಂಡದೊಳಡಗಿ ಬರಲು,
ಪಿಂಡಗತಸ್ಥಲವೆನಿಸಿತ್ತು.
ಬೆಳೆವಲ್ಲಿ ಶ್ರೀಗುರುಸ್ವಾಮಿ
ಹಸ್ತಮಸ್ತಕಸಂಯೋಗವಂ ಮಾಡಿ,
ಅಷ್ಟಾವರಣವನಳವಡಿಸಿ, ಅಷ್ಟತನುಗುಣವ ಕೆಡಿಸಿ,
ಇಷ್ಟಲಿಂಗವಂ ದೃಷ್ಟವ ಮಾಡಿಕೊಡುವಲ್ಲಿ,
ಅಂಗವೆ ಲಿಂಗಾರ್ಪಿತವೆಂದು
ಸಂಗನಶರಣರಂ ಸಾಕ್ಷಿಯಂ ಮಾಡಿ,
ಮೋಕ್ಷವನೈದಿಸಿದಿರಾಗಿ ಅದೀಗ ಲಿಂಗೈಕ್ಯ.
ಇದು ಕಾರಣ, ಪಿಂಡಗತವೆಂದರೂ
ಲಿಂಗೈಕ್ಯವೆಂದರೂ ಒಂದೇ ಸಮರಸ.
ಅದಕ್ಕೆ ದೃಷ್ಟ:
ಅಭೇದಂ ಜ್ಞಾನರೂಪೇಣ ಮಹಾನಂದಮಮಲಂ ಧ್ರುವಂ
ಅತಕ್ರ್ಯಮದ್ವಯಂ ಪೂರ್ಣಂ ಬ್ರಹ್ಮೈವಾಸ್ತಿ ನ ಸಂಶಯಃ ||
ಎಂದುದಾಗಿ, ಇದೀಗ ಲಿಂಗೈಕ್ಯದಿರವು.
ಬಸವಪ್ರಿಯ ಕೂಡಲಚೆನ್ನಬಸವಣ್ಣ,
ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.
Art
Manuscript
Music
Courtesy:
Transliteration
Huṭṭuvāta liṅgapiṇḍadoḷaḍagi baralu,
piṇḍagatasthalavenisittu.
Beḷevalli śrīgurusvāmi
hastamastakasanyōgavaṁ māḍi,
aṣṭāvaraṇavanaḷavaḍisi, aṣṭatanuguṇava keḍisi,
iṣṭaliṅgavaṁ dr̥ṣṭava māḍikoḍuvalli,
aṅgave liṅgārpitavendu
saṅganaśaraṇaraṁ sākṣiyaṁ māḍi,
mōkṣavanaidisidirāgi adīga liṅgaikya.
Idu kāraṇa, piṇḍagatavendarū
liṅgaikyavendarū ondē samarasa.
Adakke dr̥ṣṭa:
Abhēdaṁ jñānarūpēṇa mahānandamamalaṁ dhruvaṁ
atakryamadvayaṁ pūrṇaṁ brahmaivāsti na sanśayaḥ ||
endudāgi, idīga liṅgaikyadiravu.
Basavapriya kūḍalacennabasavaṇṇa,
māṁ trāhi, trāhi karuṇākarane.