Index   ವಚನ - 247    Search  
 
ಹೊತ್ತಾರೆಯಿಂದ ಅಸ್ತಮಯ ತನಕ ಸುತ್ತಿರ್ದ ಮಾಯಾಪ್ರಪಂಚನೆ ಅಳೆವುತ್ತ ಸುರುವುತ್ತಲಿರ್ದು, ಕತ್ತಲೆಯಾದರೆ, ಕಾಳುವಿಷಯದೊಳಗೆ ಮುಳುಗುತ್ತ, ಸತ್ತು ಹುಟ್ಟುತ್ತ, ಮತ್ತೆ ಬೆಳಗಾಗಿರ್ದು, ನಾನು ತತ್ವವ ಬಲ್ಲೆನೆಂದು ನುಡಿವ ಕತ್ತಲೆಮನುಜರ ಅತ್ತ ಹೊದ್ದದೆ, ಇತ್ತಲೆ ನಿಂದು ನಾಚಿ ನಗುತಿರ್ದ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.