ಅಯ್ಯಾ, ರುದ್ರಾಕ್ಷೆಯಿಂದ ಇಹವ ಕಂಡೆ.
ಅಯ್ಯಾ, ರುದ್ರಾಕ್ಷೆಯಿಂದ ಪರವ ಕಂಡೆ.
ಅಯ್ಯಾ, ರುದ್ರಾಕ್ಷೆಯಿಂದ ಗತಿಯ ಕಂಡೆ.
ಅಯ್ಯಾ, ರುದ್ರಾಕ್ಷೆಯಿಂದ ಮತಿಯ ಕಂಡೆ.
ಅಯ್ಯಾ, ರುದ್ರಾಕ್ಷೆಯಿಂದ ಮೋಕ್ಷವ ಕಂಡೆ.
ಅಯ್ಯಾ, ಇನ್ನ ಬದುಕಿದೆ, ಬದುಕಿದೆನಯ್ಯಾ,
ಅಯ್ಯಾ, ಭವಂ ನಾಸ್ತಿಯಾಯಿತ್ತೆನಗೆ.
ಅಯ್ಯಾ, ಮಹಾಲಿಂಗ ಕಲ್ಲೇಶ್ವರಾ,
ಶ್ರೀಮಹಾರುದ್ರಾಕ್ಷೆಯಿಂದೆ ಕಂಡೆನಯ್ಯಾ,
ಎನ್ನ ಕರಸ್ಥಳದಲ್ಲಿ ಮಹಾಗೂಢವಾಗಿರ್ಪ
ನಿಮ್ಮ ದಿವ್ಯಮೂರ್ತಿ ಪೆಂಪನು.
Art
Manuscript
Music
Courtesy:
Transliteration
Ayyā, rudrākṣeyinda ihava kaṇḍe.
Ayyā, rudrākṣeyinda parava kaṇḍe.
Ayyā, rudrākṣeyinda gatiya kaṇḍe.
Ayyā, rudrākṣeyinda matiya kaṇḍe.
Ayyā, rudrākṣeyinda mōkṣava kaṇḍe.
Ayyā, inna badukide, badukidenayyā,
ayyā, bhavaṁ nāstiyāyittenage.
Ayyā, mahāliṅga kallēśvarā,
śrīmahārudrākṣeyinde kaṇḍenayyā,
enna karasthaḷadalli mahāgūḍhavāgirpa
nim'ma divyamūrti pempanu.