Index   ವಚನ - 18    Search  
 
ಆದಿಜಂಗಮಕ್ಕೆ ಸ್ವಾಯತವಾದಲ್ಲಿ ಆಚಾರಲಿಂಗಪ್ರಾಣಿ. ಆಚಾರಲಿಂಗ ಸ್ವಾಯತವಾದಲ್ಲಿ ಗುರುಲಿಂಗಪ್ರಾಣಿ. ಗುರುಲಿಂಗ ಸ್ವಾಯತವಾದಲ್ಲಿ ಶಿವಲಿಂಗಪ್ರಾಣಿ. ಶಿವಲಿಂಗ ಸ್ವಾಯತವಾದಲ್ಲಿ ಜಂಗಮಲಿಂಗಪ್ರಾಣಿ. ಜಂಗಮಲಿಂಗ ಸ್ವಾಯತವಾದಲ್ಲಿ ಪ್ರಸಾದಲಿಂಗಪ್ರಾಣಿ. ಪ್ರಸಾದಲಿಂಗ ಸ್ವಾಯತವಾದಲ್ಲಿ ಮಹಾಲಿಂಗಪ್ರಾಣಿ. ಮಹಾಲಿಂಗ ಸ್ವಾಯತವಾದಲ್ಲಿ ಶೂನ್ಯಲಿಂಗಪ್ರಾಣಿ. ಶ್ರುತಿ : ಆದಿಮಧ್ಯಾಂತಶೂನ್ಯಂ ಚ ವ್ಯೋಮಾವ್ಯೋಮವಿವರ್ಜಿತಂ | ಧ್ಯಾನಜ್ಞಾನದ್ವಯಾಧೂಧ್ರ್ಛಂ ಶೂನ್ಯಲಿಂಗಮಿತಿ ಸ್ಮೃತಂ || ಇಂತೆಂದುದಾಗಿ, ಶೂನ್ಯಲಿಂಗ ಸ್ವಾಯತವಾದಲ್ಲಿ, `ಲಿಂಗೇ ಜಾತಂ ಲಿಂಗೇ ಬೀಜಂ' ಎಂಬುದಾಗಿ, ಉಪಮೆಗೆ ನಿಲುಕದ ಉಪಮಾತೀತ ನೀನೆ ಬಲ್ಲೆ, ಮಹಾಲಿಂಗ ಕಲ್ಲೇಶ್ವರಾ.