Index   ವಚನ - 20    Search  
 
ಆರಡಿ ತಾನಾಗಿಹ ಆಶ್ರಯವ ಮಾಡುವಲ್ಲಿ ಬೇರೆ ಬಾಯಿಲ್ಲ. ಕುಸುಮದ ಕಂಪಿತವನುಂಬುದಕ್ಕೆ ಬೇರೆ ಬಾಯಿಲ್ಲ. ಇಂತಿದು ಬಿಡುಮುಡಿಯ ಭೇದ. ಕರ್ತು ಭೃತ್ಯನ ವಶಗತವಾಗಿರ್ದ ತ್ರಿವಿಧಮಲವ ಮುಟ್ಟುವಲ್ಲಿ. ತನಗೆ ಬಿಟ್ಟು ಬಹ ಸಮರ್ಪಣೆಯನರಿತು, ಅವ ತೊಟ್ಟಿರ್ದುದ ತಾ ತೊಡದೆ, ಅವ ಬಿಟ್ಟುದ ತಾ ಮುಟ್ಟದೆ, ಅವ ಬಿಟ್ಟುದನರಿತು, ಅವಗೇನು ಪಾಶವ ಕಟ್ಟಿದೆ. ತೊಟ್ಟ ಬಿಟ್ಟ ಹಣ್ಣಿನಂತೆ, ನಿಜನಿಶ್ಚಯವಾದ ಭಕ್ತಿಮೂರ್ತಿ. ಮಹಾಮಹಿಮ ಕಲ್ಲೇಶ್ವರಲಿಂಗ ತಾನಾದ ಶರಣ.