Index   ವಚನ - 54    Search  
 
ಜಾತಿಯಲ್ಲಿ ಅಧಿಕವೆಂದು ನುಡಿವರು ವಿಪ್ರಜನರು. ಶ್ವಪಚ ಮಚ್ಚಿಗ ಬೋಯ ಕುಲಜರೆ ದ್ವಿಜರು? ಅಗಸ್ತ್ಯ ಕಮ್ಮಾರ ನಾವಿದ ಕುಲಜರೆ ದ್ವಿಜರು? ಸರ್ವವೇದೇಷು ಶಾಸ್ತ್ರೇಷು ಸರ್ವಯಜ್ಞೇಷು ದೀಕ್ಷಿತಃ | ಮಹಾಪಾತಕಕೋಟಿಘ್ನಃ ಶ್ವಪಚೋ ಲಿಂಗಪೂಜಕಃ | ತತ್ಸಂಭಾಷಣತೋ ಮುಕ್ತಿಃ ಗಣಮುಖ್ಯಂ ಸುಖಂ ಭವೇತ್ || ಇಂತೆಂದುದಾಗಿ, ಲಿಂಗಭಕ್ತನೆ ಕುಲಜನು. ಮಹಾಲಿಂಗ ಕಲ್ಲೇಶ್ವರನನಾರಾಧಿಸಿ ಪಡೆದರೆಲವೊ. ಮರೆದಡೆ ಹುಳುಗೊಂಡದಲ್ಲಿಪ್ಪಿರೆಲವೊ