ನಡೆವಲ್ಲಿ ಕಾಣದೆ ಎಡಹಿ, ಅರಿಕೆಯಲ್ಲಿ ಅರಿದ ಮತ್ತೆ
ನಡೆವಾಗ ಎಚ್ಚರಿಕೆ.
ಕಾಲಹುಣ್ಣು ಕತಿಕಿರಿವ ತೆರೆದಂತೆ,
ಮರವೆಯಿಂದ ಶರಣರಲ್ಲಿ ಬಿರುಬಿನ ಮಾತು ಬಂದಡೆ,
ಅದ ಒಡನೆ ತಿಳಿಯಬೇಕು.
ಅದು ಶರೀರದ ಪ್ರಕೃತಿ ಸಂಚಾರವೆಂದರಿತು,
ಬಿಡುವ ಗುಣವ ಬಿಟ್ಟು ಅರಿದಡೆ, ಭಕ್ತಿಗದೇ ಗುಣ.
ಬಟ್ಟೆಯಲ್ಲಿ ಭಯವೆಂದಡೆ ಎಚ್ಚರಿಕೆ ಬೇಕು.
ಮತ್ತೆ ಮರವೆಯ ಶರೀರಕ್ಕೆ ಅದು ಲಕ್ಷಣ.
ಮತ್ತೆ ಎಚ್ಚರಿಕೆ, ಮಹಾಲಿಂಗ ಕಲ್ಲೇಶ್ವರಾ.