ಭಕ್ತನೆಂಬ ನಾಮಧಾರಕಂಗೆ ಆವುದು ಪಥ್ಯವೆಂದಡೆ:
ಗುರುಭಕ್ತನಾದಡೂ ಜಂಗಮವನಾರಾಧಿಸೂದು,
ಗುರುಶಿಷ್ಯರಿಬ್ಬರ ಗುರುತ್ವವ ಮಾಡಿದವನಾಗಿ,
ಆಚಾರಭಕ್ತನಾದಡೂ ಜಂಗಮವನಾರಾಧಿಸೂದು,
ಆ ಗುರುಶಿಷ್ಯರಿಬ್ಬರನೂ ಸದಾಚಾರದಲ್ಲಿ ನಿಲಿಸಿ ತೋರಿದನಾಗಿ.
ಪ್ರಸಾದಭಕ್ತನಾದಡೆಯೂ ಜಂಗಮವನಾರಾಧಿಸೂದು,
ಆ ಗುರುಶಿಷ್ಯ ಸಂಬಂಧದಲ್ಲಿ
ಪ್ರಸಾದದುದ್ಭವವ ನಿರೂಪಿಸಿ ತೋರಿದನಾಗಿ.
ಲಿಂಗಭಕ್ತನಾದಡೂ ಜಂಗಮವನಾರಾಧಿಸೂದು,
ಗುರು ತನ್ನ ಲಿಂಗವನು ಆ ಶಿಷ್ಯಂಗೆ ಕೊಟ್ಟು
ತಾನು ವ್ರತಗೇಡಿಯಾಗಿ ಹೋಹಲ್ಲಿ,
ಆ ಗುರುವಿಂಗೆ ಆ ಲಿಂಗಸಹಿತವೆ
ಅ ಶಿಷ್ಯನೆ ಸಾಹಿತ್ಯವ ಮಾಡಿ ತೋರಿದನಾಗಿ.
ಇಂತು ಆವ ಪ್ರಕಾರದಲ್ಲಿಯೂ
ಜಂಗಮವೆ ಅಧಿಕವೆಂಬ ಉತ್ತರಕ್ಕೆ
ಇನ್ನಾವುದು ಸಾಕ್ಷಿಯೆಂದಡೆ:
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನೈಕ್ಯ.
ಇಂತು ಷಟ್‍ಸ್ಥಲವಿಡಿದು ನಡೆವ ಭಕ್ತಂಗೆ
ಅನುಭವವಿಡಿದು ಮಾಡುವ ಸದಾಚಾರವೆ ಸದಾಚಾರ.
ಅನುಭವಕ್ಕೆ ಬಾರದೆ ಮಾಡುವ ಸದಾಚಾರವೆ ಅನಾಚಾರ.
`ಜ್ಞಾನಹೀನಾ ಕ್ರಿಯಾಸ್ಸರ್ವೇ ನಿಷ್ಫಲಾಃ ಶ್ರುಣು ಪಾರ್ವತಿ'
ಎಂದುದಾಗಿ,
ಇದು ಕಾರಣ, ಶಿವನಲ್ಲಿ ಏಕಾಂತದಿಂದ
ಜಂಗಮಪ್ರಸಾದವ ಕೊಂಡು,
ಬಸವಣ್ಣನ ಪ್ರಸಾದವ ಕರುಣಿಸಿ ಕಾರುಣ್ಯವ ಮಾಡು,
ಮಹಾಲಿಂಗ ಕಲ್ಲೇಶ್ವರಾ.
Art
Manuscript
Music
Courtesy:
Transliteration
Bhaktanemba nāmadhārakaṅge āvudu pathyavendaḍe:
Gurubhaktanādaḍū jaṅgamavanārādhisūdu,
guruśiṣyaribbara gurutvava māḍidavanāgi,
ācārabhaktanādaḍū jaṅgamavanārādhisūdu,
ā guruśiṣyaribbaranū sadācāradalli nilisi tōridanāgi.
Prasādabhaktanādaḍeyū jaṅgamavanārādhisūdu,
ā guruśiṣya sambandhadalli
prasādadudbhavava nirūpisi tōridanāgi.
Liṅgabhaktanādaḍū jaṅgamavanārādhisūdu,
guru tanna liṅgavanu ā śiṣyaṅge koṭṭu
tānu vratagēḍiyāgi hōhalli,
ā guruviṅge ā liṅgasahitaveA śiṣyane sāhityava māḍi tōridanāgi.
Intu āva prakāradalliyū
jaṅgamave adhikavemba uttarakke
innāvudu sākṣiyendaḍe:
Bhakta māhēśvara prasādi prāṇaliṅgi śaraṇanaikya.
Intu ṣaṭsthalaviḍidu naḍeva bhaktaṅge
anubhavaviḍidu māḍuva sadācārave sadācāra.
Anubhavakke bārade māḍuva sadācārave anācāra.
`Jñānahīnā kriyās'sarvē niṣphalāḥ śruṇu pārvati'
endudāgi,
idu kāraṇa, śivanalli ēkāntadinda
jaṅgamaprasādava koṇḍu,
basavaṇṇana prasādava karuṇisi kāruṇyava māḍu,
mahāliṅga kallēśvarā.