Index   ವಚನ - 82    Search  
 
ಮುಟ್ಟಿತ್ತು ಕೆಟ್ಟಿತ್ತೆಂದಡೆ, ಇನ್ನರಸುವ ಠಾವಾವುದಯ್ಯಾ? ತನುವ ಮರೆದಡೆ, ನೆನಹಿನೊಳಗದೇನೊ? ಹಾವು ಪರೆಗಳೆದಡೆ, ವಿಷ ನಾಶವಪ್ಪುದೆ? ಶರಣನು ಕಾಯವೆಂಬ ಕಂಥೆಯ ಕಳೆದಡೆ, ಗತ ಮೃತವಹನೆ? ಅರಿವು ಲಿಂಗದಲ್ಲಿ ಪ್ರತಿಷ್ಠೆಯಾಗಿ, ನಿರ್ಲೇಪನಾಗಿ, ಮಹಾಲಿಂಗ ಕಲ್ಲೇಶ್ವರನಲ್ಲಿ ಲೀಯವಾದ ಶರಣ.