Index   ವಚನ - 8    Search  
 
ನುಡಿನಡೆಯಿಂದ ಪಡೆದರು ಮೃಡನ ಸದ್ಭಕ್ತರು. ಕೊಡುವಡೆಗೆ ಕೊಂಬೆಡೆಗೆ ಆಸ್ಕರಿಸರು ವೇಷವಂ ತಾಳರು. ಬಡತನ ಬಂದರೆ ಅನುಭವಿಸುವರು ಬಾರದ್ದು ಬಯಸರು. ಹಿಡದ ವ್ರತವ ಬಿಡದೆ ನಡೆದು ಕೈವಲ್ಯ ಪಡೆದರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.