Index   ವಚನ - 29    Search  
 
ಗುರುತೀರ್ಥಪ್ರಸಾದ ಅರುಹಿನ ಗಟ್ಟಿ, ದೊರಕೊಂಬುವುದೆ ನರಕೀಟಕರಿಗೆ? ಬರಿಯ ಮಾತಿನ ಮಾಲೆಯೊ ಕೊಳುಕೊಡೆಯೆಲ್ಲವು. ಕರವೆತ್ತಿಕೊಟ್ಟಾತ ಗುರುವಲ್ಲ; ಕೊಂಡಾತ ಶಿಷ್ಯನಲ್ಲ ನಿರುತ ನಿಜ ಗುಹೇಶ್ವರಲಿಂಗದಲ್ಲಿ ಬೆರೆತುಕೊಂಬುದೆ ತೀರ್ಥ, ಅರಿತುಕೊಂಬದೆ ಪ್ರಸಾದ, ಮರೆಯಿದು ಮಾಟ ಮರ್ತ್ಯದ ಕೂಟ, ವಂತಿಗೆ ಬೇರೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.