ಕಲಿಕೆಯ ಮಾತಿನಮಾಲೆಯ ನಿಲೆಶಿಲೆಗೆ
ನಿಲುಕದು ಸಂಗನ ಶರಣಸ್ಥಲ,
ಬಲಾತ್ಕಾರಕ್ಕೆ ಬಡಿದು ಹಾಲನೆರೆದರೆ [ಬಲತ್ವ]ವಾಹುದೆ?
ಎಲವದ ಮರದ ಎಲೆ ಹೂವು ಸುಂದರ ಫಲಪದವಹುದೆ?
ಕೊಲೆ ಅತ್ಮದಲ್ಲಿ, ಕೊನೆನಾಲಿಗೆಯ ಮೃದು ಕ್ರೋಧ…
ಫಲ ನಿಃಫಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music Courtesy:
Video
TransliterationKalikeya mātinamāleya nileśilege
nilukadu saṅgana śaraṇasthala,
balātkārakke baḍidu hālaneredare [balatva]vāhude?
Elavada marada ele hūvu sundara phalapadavahude?
Kole atmadalli, konenāligeya mr̥du krōdha…
phala niḥphala kāṇā
ele nam'ma kūḍala cennasaṅgamadēvayya.