ನೆಳಲು ಅಪ್ಪೆನೆಂಬ ಅರೆಮರಳು ಭ್ರಾಂತನೆ ಕೇಳಯ್ಯ
ತಿಳಿ ನಿನ್ನೊಳು ನೀನು ತ್ರಿಪುರದ ಮಾರ್ಗವನು,
ಸುಳುಹಿನೊಳು ಸೂಕ್ಷ್ಮ ಸುಖದುಃಖಂಗಳು,
ಬೆಳೆದುಯಿದೆ ಭೇದಾಭೇದವು,
ಮೊಳೆ ಚಿವುಟಿ(ಟ?)ದ ಕಾರಣದಿಂದಲಿ
ಹೆಮ್ಮರನಾಯಿತ್ತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Neḷalu appenemba aremaraḷu bhrāntane kēḷayya
tiḷi ninnoḷu nīnu tripurada mārgavanu,
suḷuhinoḷu sūkṣma sukhaduḥkhaṅgaḷu,
beḷeduyide bhēdābhēdavu,
moḷe civuṭi(ṭa?)Da kāraṇadindali
hem'maranāyittu kāṇā
ele nam'ma kūḍala cennasaṅgamadēvayya.