Index   ವಚನ - 40    Search  
 
ಉದಯ ಅಸ್ತಮಯವು ನದಿಯೊಳು ಮುಳುಗಿ ಗದಗದನೆ ನಡುಗಲು ಗರ್ಭಕ್ಕೆ ವೈರವು. ಶುದ್ದ ಮಂತ್ರವು ಮರೆದು ಸೂಕ್ಷ್ಮವ ತಿಳಿಯದೆ ಗದಬಡಿಸಿ ಎಮ್ಮೆ ಮಡುವಿನೊಳು ಬಿದ್ದಂತೆ ವ್ಯರ್ಥ ಸ್ನಾನವು, ಪದರ ಅತ್ಮದೊಳು ಸೂತಕ ಎಂದ ಆ ಗತವು ಹಿಂಗದು, ಮದಹೊಲೆಯಿಂದ ಪುಕ್ಕಟ ಜ್ಞಾನಿ ಅದ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.