Index   ವಚನ - 41    Search  
 
ಶಾಸ್ತ್ರವೆಲ್ಲ ಸಂತೆಯ ಸಂಗಡ, ಪುರಾಣವೆಲ್ಲ ಪುಂಡರ ಸಂಗಡ ನೇತ್ರಸೂತ್ರದಲ್ಲಿ ಗ್ರಹಿಸಿಪ್ಪುದೆಲ್ಲ ಶುದ್ದ ಅಬದ್ಧವು. ಕಾತುರು ಕಡು ಮೂರ್ಖತ್ವವು, ಭ್ರಾಂತು ಉಚ್ಛಿಷ್ಟ ಉಚ್ಛಿಷ್ಟವು. ಭೂತಪ್ರಾಣಿಗೆ ಯಾತಕಯ್ಯ ಭೂಸ್ವರ್ಗಂಗಳು? ಆತ್ಮ ಶುಚಿರ್ಭೂತನಾದರೆ ಅಪರಿಮಿತ ಸಾಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.