Index   ವಚನ - 50    Search  
 
ದಾರಿದ್ರ್ಯವ ಅನುಭವಿಸದಲ್ಲದೆ, ವೀರಧೀರತ್ವ ಅಳವಡುವುದೆ? ಕಾರಿದ ಕೂಳಿಗೆ ಕೈಯಿತ್ತಲ್ಲದೆ, ಕರುಣಪ್ರಸಾದ ಸಿಕ್ಕುವುದೆ? ಮೂರ ಮಾರಿಸಿಕೊಂಡಲ್ಲದೆ, ಮಂತ್ರಪಿಂಡವಾಹುದೆ? ದೂರ ವಿಚಾರಿಸಿ ನೋಡಿದಲ್ಲದೆ ದುಃಖವಡಗದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.