ಜ್ಞಾನಸ್ವರೂಪು ಮಾನವಸ್ವರೊಪಿನೊಳು
ಅಡಿಗಿದ್ದ ಪರಿಯೆಂತು ಹೇಳಾ!
ಮಾನಿತಗೆ ಮಾಯವಿಲ್ಲದಿರೆ, ಮತ್ತೆ ಉತ್ಪತ್ತಿ ಸ್ಥಿತಿ ಲಯವಿಲ್ಲ.
ಜ್ಞಾನಕ್ಕೆ ಅಜ್ಞಾನ ಆದಿ, ಮನಕ್ಕೆ ನಿರ್ಮನವೆ ಆದಿ
ಸ್ವಾನುಭವಕ್ಕೆ ಕ್ಷಣ ಚಿತ್ತು, ಕ್ಷಣವಿಚಿತ್ತು.
ಇನಿತು ಅಂತಸ್ತು ಮಾನಿತಗೆ, ಒಂದೇ ಬುಡ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.