Index   ವಚನ - 90    Search  
 
ಅಳವಡದವರಿಗೆ ಅಳವಡುವುದೇನಯ್ಯ ಭಕ್ತಿ? ಬಳೆಯ ಬಿಗುವಿನಲಿ ಕೈಗೇರಿಸಲು ಬಾಳುವವೆ? ಹುಳಿಯ ಮೆದ್ದವನ ಹಲ್ಲಿಗೆ ಹುರಿಗಡಲೆ ನುರಿವುದೆ? ಅಳಿಮನದ(ದಿ?) ದಾಸಿವೇಶಿಯರಿಗೆ ಅಳುಪುವಂಗೆ ಆಗಮನವೇಕೆ ನಿಗಮವೇಕೆ? ತಿಳಿ ನಿನ್ನೊಳು ನೀನರಿತು ಮನವೆ, ಬಳಲಬೇಕಾದೀತು ಅನಂತಯೋನಿಯಲಿ. ಬೆಳೆಯನುಣ್ಣಲೊಲ್ಲದಿರೆ ಹೋಗು ನಿನ್ನ ಪೂರ್ವಕ್ಕೆ. ನಳಿನಳಿಯೆಂಬ ಕೊಂಬೆ ಮುರಿಯುವ ನಿಲ್ಲುವುದೆ? ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.