Index   ವಚನ - 108    Search  
 
ಭೂಮಿಯ ಹೋಲುವೆ ಭಕ್ತ, ಜಲವ ಹೋಲುವೆ ಮಹೇಶ್ವರ, ಅಗ್ನಿಯ ಹೋಲುವೆ ಪ್ರಸಾದಿ, ವಾಯುವ ಹೋಲುವೆ ಪ್ರಾಣಲಿಂಗಿ, ಆಕಾಶವ ಹೋಲುವೆ ಶರಣ, ಇಂತೀ ಪಂಚತತ್ವದ ಚೈತನ್ಯ ಹೋಲುವೆ ಐಕ್ಯ. ಷಡುಮುಖ ಸಮಸ್ತಕ್ಕೆ ಭಕ್ತನೆ ಬುಡ, ಶಿವನೆ ಬೀಜ. ವಿಶ್ವತೋಮುಖ ವಿನೋದಾರ್ಥ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.