Index   ವಚನ - 114    Search  
 
ನಿನ್ನ ವಿನೋದವ ನೋಡುವರೆ, ಇನ್ನೊಬ್ಬರಳವೆ? ಮುನ್ನ ಯಾಚಕ ವೃತ್ತಿ ಬೇಕಾಗಿ ಭಕ್ತನಾದೆ. ಬೇಡಿದ್ದ ಕೊಡುವುದಕ್ಕೆ ಶಿವನಾದೆ. ಭವ ಭವದಲ್ಲಿ ಭಕ್ತನ ಪ್ರಸಾದ ಬಲ್ಲರೆ, ಆಚಾರ್ಯರು? ಭವಿಯ ಪ್ರಸಾದ ಬಲ್ಲರೆ, ಭಕ್ತರು? ಭವಂ ನಾಸ್ತಿ, ಭಕ್ತ ಆಚಾರ್ಯಂ ನಾಸ್ತಿ ಭಾವಂ ಭಕ್ತಿ, ಭಕ್ತಿ ಭಾವ ಪ್ರಸಾದ ಅಪರಮಿತ ಉಪಮಾತೀತ. ಭಾವಜ್ಞ ಭಕ್ತ, ಭಕ್ತ[ನ]ನಾದಿ ಶಿವ ಬಹುಯಾಚಕ ಭಕ್ತಿ ನಾಸ್ತಿ, ಬಂಧನ ಪ್ರಾಪ್ತಿ. ಭವಭವ ಶಿವಕಲ್ಪಿತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.