Index   ವಚನ - 128    Search  
 
ಭಾವ ಗಟ್ಟಿಗೊಂಬುದಕ್ಕೆ ಬಾಹ್ಯವ ತೋರಿದಿರಿ ಅಯ್ಯಾ. ಗಾಯವು [ಮಾದು] ಬಂಬದಕ್ಕೆ ಮದ್ದುಗಳ ಕಲ್ಪಿಸಿದಿರಿ ಅಯ್ಯಾ. ಮಾಯಾಮೋಹವೆಲ್ಲ ಮೋಹವೆಂದು(ಮೋಸವೆಂದು?) ಕಂಡಾತಂಗೆ ದೇಹವೆ ಗುರು, ಪ್ರಾಣವೆ ಲಿಂಗ, ಸಾಹಿತ್ಯವೆ ಜಂಗಮ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.