ಅನ್ನದೈವದ ಆಚರಣೆ ಸಲ್ಲದು ಎಂಬ
ಭಿನ್ನ ಭಾವದ ಭ್ರಾಂತರೆ ಕೇಳಿರಯ್ಯ:
ತನು ಎಂಬುದು ತದ್ದು ತುರಿ ಚಿಬ್ಬು ಭಂಗು ಭಗದಳ
ತನ್ನ ಶರೀರದಲ್ಲಿ ಪುಟ್ಟಿತ್ತು.
ಆ ನೇತ್ರದಿಂದ ಅನ್ನದೈವ ಅಷ್ಟು ತೋರುತಿಹುದು.
ತನ್ನಿಂದ ಆದುದು ತನ್ನಿಂದ ಹೋದುದು.
ಹೊನ್ನೇ ಕುಲ, ಅನ್ನ ಉದಕವೇ ದೈವ
ಇನ್ನು ಇದರಿಂದ ಹೆಚ್ಚು ಇಲ್ಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.