Index   ವಚನ - 141    Search  
 
ಸತಿಯ ಹೋಲುವೆ ಭೂತಪ್ರಾಣಿ. ಪತಿಯ ಹೋಲುವೆ ಲಿಂಗಪ್ರಾಣಿ. ಸತಿಪತಿ ಉಭಯ ಸಂಬಂಧ, ಆರುದರುಶನದ ರೂಪು ಸ್ವರೂಪು ಪಿತ ಪ್ರಾಣಲಿಂಗ, ಸ್ವತಂತ್ರ ಜೀವನಾಂಗ. ಸಾಂಪ್ರತ ನಡೆವುದು ಪರಮಸಂಗ, ಪರಿಪರಿ ತನ್ನ ಗತಿಲಯ ಅತಃಪರಾಯ, ಶ್ರುತಿ ಗುಹೇಶ್ವರಲಿಂಗದೊಳು ಅಡಕವಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.